Sunday, April 09, 2006

A journey from freedom to liberation: Mukta

T. N. Seetharam's much followed teleserial Mukta's title song Mukta.

ಮುಕ್ತ
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇವೆ ಬಂಧ ಮುಕ್ತ |
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇವೆ ಬಂಧ ಮುಕ್ತ ||

ಕಾರು ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ..
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ, ಅದರ ಗರಿಗೆ ಮುಕ್ತಿ |
ಎದೆಯ ನೋವು ಹಾಡಾಗಿ ಹೊಮ್ಮಿದರೆ, ಭಾವಕ್ಕೆ ಬಂದ ಮುಕ್ತಿ...
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ ||

ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವ?
ದಾಟಿ ಈ ಪ್ರವಾಹ? |
ತಾನು ಬೆಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ,
ನಿಶ್ಚಯದ ಮೂರ್ತ ರೂಪ..||

ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ,
ಎಲ್ಲುಂಟು ಆಚೆ ತೀರ
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ,
ಎಲ್ಲುಂಟು ಆಚೆ ತೀರ

ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ...
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ, ಅದರ ಗರಿಗೆ ಮುಕ್ತಿ...|
ಎದೆಯ ನೋವು ಹಾಡಾಗಿ ಹೊಮ್ಮಿದರೆ, ಭಾವಕ್ಕೆ ಬಂದ ಮುಕ್ತಿ...
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ....||


You can download this beautiful song at Pratap's page

No comments: